KKR vs RCB ಮೊದಲ ಪಂದ್ಯ ಈ ಕಾರಣಕ್ಕೆ ರದ್ದು…!?

ಬೆಂಗಳೂರು: ಐಪಿಎಲ್ 2025 ರ ಸೀಸನ್-18 ನ ಮೊದಲ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಡ್ಜರ್ಸ್ ಬೆಂಗ್ಳೂರಿನ ನಡುವೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕೆಕೆಆರ್ ಮತ್ತು ಆರ್‌ಸిబಿಯ ನಡುವೆ ನಾಳೆ ಕೊಲ್ಕತ್ತದಲ್ಲಿ ಆಟವಾಗಲಿರುವ ಐಪಿಎಲ್ 2025ರ ಉದ್ಘಾಟನಾ ಪಂದ್ಯಕ್ಕಾಗಿ ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಸೀಸನ್-18 ಯ ಮೊದಲ ಪಂದ್ಯದ ವೇಳೆ ಅಭಿಮಾನಿಗಳಿಗೆ ಬಾರಿ ನಿರಾಸೆ ಕಾದಿದೆ ಎನ್ನಲಾಗುತ್ತಿದೆ. ಹೌದು. ಈ ಪಂದ್ಯಕ್ಕೆ ಮಳೆರಾಯ ಕಾಟ ಕಾಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೆಕೆಆರ್ ಮತ್ತು ಆರ್‌ಸిబಿಯ ನಡುವೆ ಮೊದಲ ಪಂದ್ಯ 22 ಮಾರ್ಚ್ ರಂದು ನಡೆಯಲಿದೆ. ಪಂದ್ಯ ದಿನ ಸಂಜೆ 7ರಿಂದ 8ರ ನಡುವೆ ಮಳೆ 70 ಶೇಕಡಾ ಮಳೆಯ ಅವಕಾಶ ಇದೆ ಎನ್ನಲಾಗಿದೆ. ಐಎಂಡಿ ಪ್ರಕಾರ, ಮಾರ್ಚ್ 19 ರಿಂದ 22 ರವರೆಗೆ ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ.

ಇದಲ್ಲದೆ, ಮಾರ್ಚ್ 20 ರಿಂದ ಮಾರ್ಚ್ 22 ರವರೆಗೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಮಳೆಯಾಗುವ ಬಗ್ಗೆ ಪ್ರಾದೇಶಿಕ ಹವಾಮಾನ ಕೇಂದ್ರ ಕೋಲ್ಕತ್ತಾ ಮಾಹಿತಿ ನೀಡಿದೆ. ಪ್ರಾದೇಶಿಕ ಹವಾಮಾನ ಮುನ್ಸೂಚನೆ ಸಂಸ್ಥೆ ಬಂಗಾಳದಲ್ಲಿ ಮಳೆಯ ಸಂಭವನೀಯ ಪರಿಣಾಮವನ್ನು ಪಟ್ಟಿ ಮಾಡಿದೆ.

ಮಳೆಯ ಕಾರಣದಿಂದ ಪಂದ್ಯ ಅನ್ನು ರದ್ದುಗೊಳಿಸಲಾಗಿದ್ರೆ, ಎರಡೂ ತಂಡಗಳಿಗೆ 1-1 ಅಂಕಗಳನ್ನು ನೀಡಲಾಗುತ್ತದೆ. ಪ್ರಥಮ ಪಂದ್ಯಕ್ಕಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಡ್ರೆಸ್ ರಿಹರ್ಸಲ್ ನಡೆಯುತ್ತಿದೆ. ಓಪನಿಂಗ್ ಸಮಾರಂಭದಲ್ಲಿ ಶ್ರೇಯಾ ಘೋಷಾಲ್, ದಿಶಾ ಪಟಾಣಿ ಜೊತೆ ಕರಣ್ ಕ್ಯೋಜ್ಲಾ ಪ್ರದರ್ಶನ ನೀಡಲಿದ್ದಾರೆ.