ರಶ್ಮಿಕಾ ಮಂದಣ್ಣಗೆ ಸಿಕ್ತು ಗುಲಾಬಿ ಹೂವು; ಕೊಟ್ಟಿದ್ದು ವಿಶೇಷ ವ್ಯಕ್ತಿ

ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಅವರು ಗುಲಾಬಿ ಹೂವು ಹಿಡಿದು ನಿಂತಿದ್ದಾರೆ. ಗುಲಾಬಿ ಹೂವನ್ನು ಹುಡುಗಿಯರು ಹಿಡಿದು ನಿಂತಿದ್ದಾರೆ ಎಂದಾದರೆ ಅದನ್ನು ಯಾರೋ ಕೊಟ್ಟಿರುತ್ತಾರೆ ಎಂಬ ಅನುಮಾನ ಮೂಡೋದು ಸಹಜ. ಇದಕ್ಕೆ ಅವರೇ ಉತ್ತರ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಗುಲಾಬಿ ಹೂವು ಕೊಟ್ಟಿದ್ದು ಬೇರೆ ಯಾರೋ ಅಲ್ಲ. ಅವರೇ ಗುಲಾಬಿ ಹೂವು ಖರೀದಿಸಿದ್ದಾರೆ. ತಮಗೆ ತಾವೇ ಗಿಫ್ಟ್ ಕೊಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಅವರ ಮಾತು ಅನೇಕರಿಗೆ ಇಷ್ಟ ಆಗಿದೆ.

‘ಕೊನೆಯ ಬಾರಿಗೆ ನಿಮಗೆ ಹೂ ಸಿಕ್ಕಿದ್ದು ಯಾವಾಗ? ನಿಮ್ಮನ್ನು ಆಗಾಗ್ಗೆ ಪ್ರಶಂಸಿಸಲು ಮತ್ತು ಧನ್ಯವಾದ ಹೇಳಲು ಹೂವನ್ನು ಕೊಟ್ಟುಕೊಳ್ಳಬೇಕು. ಏಕೆಂದರೆ ನೀವು ಜಗತ್ತಿನ ಎಲ್ಲಾ ಪ್ರೀತಿ ಮತ್ತು ದಯೆಗೆ ಅರ್ಹರು’ ಎಂದು ರಶ್ಮಿಕಾ ಕ್ಯಾಪ್ಶನ್ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದವರು. ಅವರಿಗೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬೇಡಿಕೆ ಇದೆ. ಹಲವು ಸ್ಟಾರ್ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಒಮನ್​ನಲ್ಲಿ ಅವರು ಬರ್ತ್​ಡೇ ಆಚರಿಸಿಕೊಂಡರು.

ರಶ್ಮಿಕಾ ಬರ್ತ್​ಡೇನ ತಮ್ಮ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಜೊತೆ ಆಚರಿಸಿಕೊಂಡರು ಎನ್ನುವ ಮಾತಿದೆ. ಆದರೆ, ಇದು ಇನ್ನೂ ಅಧಿಕೃತವಾಗಿಲ್ಲ. ಈ ಬಗ್ಗೆ ಇನ್ನೂ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಈ ಬಗ್ಗೆ ಇನ್ನಷ್ಟೇ ಮಾಹಿತಿ ರಿವೀಲ್ ಆಗಬೇಕಿದೆ.