ಇಂದೋರ್ : ಮಧ್ಯಪ್ರದೇಶದ ಇಂದೋರ್ ನಲ್ಲಿ ಬಹಳ ದಿನಗಳ ನಂತರ ಕೊರೊನಾ ಮಾರಣಾಂತಿಕ ರೋಗ ಮತ್ತೆ ಕಂಡುಬಂದಿದೆ. ಒಬ್ಬರಲ್ಲ, ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಕೇಸ್ ಬೆಳಕಿಗೆ ಬಂದಿದೆ. ಅಲ್ಲದೇ ಚಿಕಿತ್ಸೆ ಸಮಯದಲ್ಲಿ ಒಬ್ಬ ಮಹಿಳೆ ಸಾವನಪ್ಪಿದ್ದಾರೆ ಮತ್ತು ಇನ್ನೊಬ್ಬ ಕೊರೊನಾ ಪಾಸಿಟಿವ್ ಬಂದ ಯುವಕನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಇದು ದೊಡ್ಡ ಕೋಲಾಹಲ ಸೃಷ್ಟಿ ಮಾಡಿದ್ದು, ಜನರು ಮತ್ತೆ ಆತಂಕಗೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ ಕೊರೊನಾವೈರಸ್ ಮತ್ತೊಮ್ಮೆ ಅಪ್ಪಳಿಸಿದೆ. ಇಂದೋರ್ ನ ಖಾಸಗಿ ಆಸ್ಪತ್ರೆಗೆ ಮಹಿಳೆಯೊಬ್ಬರು ಹೊಟ್ಟೆ ನೋವಿನಿಂದ ದಾಖಲಾಗಿದ್ದರು. ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತನಿಖೆಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಚಿಕಿತ್ಸೆಯ ಸಮಯದಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಈ ಘಟನೆ ಆರೋಗ್ಯ ಇಲಾಖೆಯಲ್ಲಿ ಕೋಲಾಹಲ ಸೃಷ್ಟಿಸಿದೆ.
ಅದೇ ಇಂಧೋರ್ನಲ್ಲಿ ಮತ್ತೊಬ್ಬ ಹುಡುಕನಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಒಂದು ಕಡೆ ಮಹಿಳೆ ಕೊರೊನಾ ಸೋಂಕಿನಿಂದ ಸಾವನಪ್ಪಿದ್ರೆ, ಇದೀಗ ಈ ಹುಡುಗನಿಗೂ ಕೊರೊನಾ ಪಾಸಿಟಿವ್ ಬಂದಿ್ಎ. ಕೊರೊನಾ ವೈರಸ್ ಮರಳಿರುವುದು ವೈದ್ಯರಿಗೆ ಅಚ್ಚರಿ ಮೂಡಿಸಿದೆ.
ಬಹಳ ದಿನಗಳ ನಂತರ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಬ್ಬರು ಕೋವಿಡ್ ರೋಗಿಗಳು ಕಂಡುಬಂದಿದ್ದಾರೆ. ಅವರಲ್ಲಿ ಒಬ್ಬ ಯುವಕನಾಗಿದ್ದರೆ, ಇನ್ನೊಬ್ಬರು ವೃದ್ಧ ಮಹಿಳೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರಿಗೂ ಬೇರೆ ಬೇರೆ ಕಾಯಿಲೆಗಳಿದ್ದು, ಮಹಿಳೆ ಸೋಮವಾರ ಸಾವನಪ್ಪಿದ್ದಾರೆ. ಜೊತೆಗೆ ಕೊರೊನಾ ಪಾಸಿಟಿವ್ ಬಂದಿರುವ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ರೋಗಿಗಳು ಇಂದೋರ್‌ನವರು ಎಂದು ಹೇಳಲಾಗುತ್ತದೆ.
ಕೊರೊನಾ ಪಾಸಿಟಿವ್ ಬಂದಿರುವ ಯುವಕ ಎರಡು-ಮೂರು ದಿನಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ. ಆತ ಮೊದಲು ಬೇರೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡ, ಆದರೆ ಯಾವುದೇ ವ್ಯತ್ಯಾಸವಾಗದಿದ್ದಾಗ, ಅರಬಿಂದೋ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಲ್ಲಿ ಆ ಯುವಕನಿಗೆ ಹಲವಾರು ಪರೀಕ್ಷೆಗಳು ನಡೆದಿದ್ದು, ಕೊನೆಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಸಾವನಪ್ಪಿರುವ ಮಹಿಳೆ ಇಂದೋರ್‌ನ ಪಶ್ಚಿಮ ಪ್ರದೇಶದ ನಿವಾಸಿಯಾಗಿದ್ದರು. 74 ವರ್ಷದ ಮಹಿಳೆ ಮೂತ್ರಪಿಂಡ ಕಾಯಿಲೆಗೆ ದಾಖಲಾಗಿದ್ದರು ಮತ್ತು ತೀವ್ರ ಸೆಪ್ಟಿಕ್ ಆಗಿದ್ದರು. ಅವಳು ಕೊಮೊರ್ಬಿಡ್ ರೋಗಿಯಾಗಿದ್ದಳು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪರಿಗಣಿಸಿ, ಅವರನ್ನು ಫ್ಲೂ ಪ್ಯಾನಲ್ ಪರೀಕ್ಷೆಗೂ ಒಳಪಡಿಸಲಾಯಿತು. ಇದರಲ್ಲಿ ಆಕೆಗೆ ಕೋವಿಡ್ ಪಾಸಿಟಿವ್ ಕೂಡ ಕಂಡುಬಂದಿದೆ. ಅವರು ಸೋಮವಾರ ನಿಧನರಾಗಿದ್ದಾರೆ. ಮಹಿಳೆಗೆ ಮೂತ್ರಪಿಂಡದ ತೊಂದರೆಗಳು ಮತ್ತು ಇತರ ಕಾಯಿಲೆಗಳಿದ್ದವು ಮತ್ತು ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದ್ದು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.
ಮಹಿಳೆಯ ನಂತರ, ಒಬ್ಬ ಯುವಕ ಕೂಡ ದೀರ್ಘಕಾಲದವರೆಗೆ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಎಂದು ವೈದ್ಯರು ಮಾಹಿತಿ ನೀಡಿದರು. ಅವರ ಚಿಕಿತ್ಸೆಗಾಗಿ ಹಲವು ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ಇದರಲ್ಲಿ ಕರೋನಾ ಪರೀಕ್ಷೆಯೂ ಸೇರಿದೆ. ಅವರಿಗೆ ಕೊರೊನಾ ಪಾಸಿಟಿವ್ ಬಂದ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ರಸ್ತುತ ಯುವಕ ಆರೋಗ್ಯವಾಗಿದ್ದಾನೆ. ಅವರ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಚೆನ್ನೈಯಲ್ಲಿ ಮಹಿಳೆ ಸೇರಿದಂತೆ ಮೂವರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ 21 ರಂದು ಇಬ್ಬರು ಪುರುಷರು ಸೇರಿದಂತೆ ಮೂವರಲ್ಲಿ ಸೋಂಕು ದೃಢಪಟ್ಟಿತ್ತು. ಆತಂಕಪಡುವ ಅಗತ್ಯವಿಲ್ಲ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಮಾರು 32 ಜನರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.
Follow Me