‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ನಮ್ರತಾ ಗೌಡ ಅವರು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್‌ಡೇಯನ್ನು ರಕ್ಷಕ್ ಮತ್ತಷ್ಟು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಅವರು ಕೊಟ್ಟಿರುವ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ನಮ್ರತಾ ಗೌಡ ಹುಟ್ಟುಹಬ್ಬದ (ಏ.14) ಹಿನ್ನೆಲೆ ಸರ್ಪ್ರೈಸ್ ಆಗಿ ರಕ್ಷಕ್ ಮನೆಗೆ ಕರೆದುಕೊಂಡು ಹೋಗಿ ನಟಿಯ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಬರ್ತ್‌ಡೇಗೆ ಅಲಂಕರಿಸಿರುವ ರೀತಿ ಹಾಗೂ ಸಹೋದರ ರಕ್ಷಕ್ ಪ್ರೀತಿ ನೋಡಿ ನಮ್ರತಾ ಕಣ್ಣೀರಿಟ್ಟಿದ್ದಾರೆ. ಇದು ನಟ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಯೋಗೆ ಹುಟ್ಟುಹಬ್ಬದ ಶುಭಾಶಯಗಳು ಪಾಪು. ನಿಮ್ಮೊಂದಿಗೆ ಎಂದೆಂದಿಗೂ ಎಂದು ರಕ್ಷಕ್ ಕ್ಯಾಪ್ಷನ್ ನೀಡಿದ್ದಾರೆ.
ನಮ್ರತಾ ಗೌಡ ಅವರ ಈ ವರ್ಷದ ಜನ್ಮ ದಿನ ವಿಶೇಷಾಗಿಯೇ ಇದೆ. ಎಲ್ಲ ಸ್ನೇಹಿತರು ಒಂದು ರೀತಿ ಜನ್ಮ ದಿನದ ವಿಶ್ ಮಾಡಿದ್ದಾರೆ. ಆದರೆ, ಸಹೋದರ ಬುಲೆಟ್ ರಕ್ಷಕ್ ಹಾಗೆ ಮಾಡೋಕೆ ಹೋಗಿಲ್ಲ. ನಮ್ರತಾ ಅವರಿಗಾಗಿಯೇ ಸ್ವರ್ಗ ಲೋಕವನ್ನೆಸೃಷ್ಟಿ ಮಾಡಿದ್ದಾರೆ. ಆ ಒಂದು ಲೋಕದಲ್ಲಿಯೇ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ.
ರಕ್ಷಕ್ ಬುಲೆಟ್ ಕೊಟ್ಟ ಸರ್ಪ್ರೈಸ್‌ಗೆ ನಮ್ರತಾ ಗೌಡ ಮಂತ್ರಮುಗ್ಧಗೊಂಡಿದ್ದಾರೆ. ಮಾತುಗಳೇ ಆಡದೇ ಸುಮ್ಮನೆ ನಿಂತು ನೋಡಿದ್ದಾರೆ. ಆ ಮೇಲೆ ಪ್ರೀತಿಯಿಂದಲೇ ತಂದ ಕೇಕ್ ಅನ್ನ ಕಟ್ ಮಾಡಿದ್ದಾರೆ. ರಕ್ಷಕ್ ಸೇರಿದಂತೆ ಇತರರಿಗೂ ತಿನಿಸಿ ಖುಷಿಪಟ್ಟಿದ್ದಾರೆ.ಹಾಗೆ ರಕ್ಷಕ್ ಬುಲೆಟ್ ಕೊಟ್ಟ ಸರ್ಪ್ರೈಸ್‌ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ವಿಶೇಷವಾಗಿ ಈ ಒಂದು ವಿಡಿಯೋವನ್ನ ಸ್ವತಃ ನಮ್ರತಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ. ಇದಕ್ಕೆ ಉತ್ತಮ ಕಾಂಪ್ಲಿಮೆಂಟ್ಸ್ ಬಂದಿವೆ. ಹುಟ್ಟುಹಬ್ಬದ ವಿಶ್‌ಗಳು ಸಾಲು ಸಲು ಬಂದಿವೆ ಅಂತಲೂ ಹೇಳಬಹುದು.