25 ವರ್ಷಗಳ ಹಿಂದೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದಲ್ಲಿ ಅಂಧ ಮಗುವೊಂದು ಕಸದ ಬುಟ್ಟಿಯಲ್ಲಿ ಪತ್ತೆಯಾಗಿತ್ತು. ನಂತರ ಪೊಲೀಸರು ಮಗುವನ್ನು ರಕ್ಷಿಸಿ ಸುಧಾರಣಾ ಗೃಹಕ್ಕೆ ಕರೆದ್ಯೊಯಿದಿದ್ದಾರೆ. ಈಗ ಇದೇ ಮಗು ಬೆಳೆದು ದೊಡ್ಡವಳಾಗಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ನಾಗ್ಪುರ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡಿದ್ದಾಳೆ. ಇತ್ತೀಚೆಗೆ ಅವರಿಗೆ ನೇಮಕಾತಿ ಪತ್ರ ಸಿಕ್ಕಿದೆ. ಆ ಯುವತಿಯ ಹೆಸರೇ ಮಾಲಾ ಪಾಪಲ್ಕರ್.
ಮಾಲಾ ನಾಗ್ಪುರ ಕಲೆಕ್ಟರೇಟ್ ನಲ್ಲಿ ತನ್ನ ಮೊದಲ ಹುದ್ದೆಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾಳೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (ಎಂಪಿಎಸ್‌ಸಿ) ಕ್ಲರ್ಕ್-ಕಮ್-ಟೈಪಿಸ್ಟ್ ಪರೀಕ್ಷೆಯಲ್ಲಿ (ಗ್ರೂಪ್ ಸಿ) ಉತ್ತೀರ್ಣರಾಗುವ ಮೂಲಕ ಮಾಲಾ ಪಾಪಲ್ಕರ್ ಸುದ್ದಿಯಾಗಿದ್ದರು. ಮೂರು ದಿನಗಳ ಹಿಂದೆ, 26 ವರ್ಷದ ಮಾಲಾ ಅವರಿಗೆ ನಾಗ್ಪುರ ಕಲೆಕ್ಟರೇಟ್ ನಲ್ಲಿ ಕಂದಾಯ ಸಹಾಯಕಿಯಾಗಿ ನೇಮಕಗೊಂಡಿರುವ ಬಗ್ಗೆ ಮಾಹಿತಿ ನೀಡುವ ಪತ್ರ ಬಂದಿದೆ. ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ 8-10 ದಿನಗಳಲ್ಲಿ ಮಾಲಾ ಕೆಲಸಕ್ಕೆ ವರದಿ ಮಾಡಿಕೊಳ್ಳುವ ಸಾಧ್ಯತೆಯಿದೆ.
25 ವರ್ಷಗಳ ಹಿಂದೆ ಜಲಗಾಂವ್ ರೈಲು ನಿಲ್ದಾಣದಲ್ಲಿ ಕಸದ ಬುಟ್ಟಿಯಲ್ಲಿ ಶಿಶುವಾಗಿ ತ್ಯಜಿಸಲ್ಪಟ್ಟಿದ್ದ ಕುರುಡು ಮಾಲಾಗೆ ಈಗ ನಾಗ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ. ಮಾಲಾ ಹುಟ್ಟಿನಿಂದಲೇ ಕುರುಡಳಾಗಿದ್ದರೂ, ಅನಾಥಾಶ್ರಮದ ಬೆಂಬಲ ಮತ್ತು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣದ ಪ್ರವೇಶದೊಂದಿಗೆ, ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಮಾಲಾ ಅವರ ಹೋರಾಟದ ಕಥೆ ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ.