ಸೌದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೈನವಿರೇಳಿಸೋ ಸ್ವಾಗತ

ಜೆಡ್ಡಾ: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದಾರೆ.

ಇಂದು ಸೌದಿಗೆ ಭೇಟಿ ನೀಡಿದ ಮೋದಿಗೆ ಅಲ್ಲಿಯ ಯುದ್ಧ ವಿಮಾನಗಳು ಸ್ವಾಗತ ಮಾಡಿವೆ. ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ವಿಮಾನವು ಜಿದ್ದಾ ಮೂಲಕ ಸೌದಿ ವಾಯುಭಾಗವನ್ನು ಪ್ರವೇಶಿಸುತ್ತಿದ್ದಂತೆಯೇ ಎಫ್-15 ಫೈಟರ್​​ ಜೆಟ್​​ ಗಳೂ ಜೊತೆಗೆ ಬಂದಿವೆ.

ಅಮೆರಿಕದ ಎಫ್-15 ಯುದ್ಧವಿಮಾನಗಳು ರಾಯಲ್ ಸೌದಿ ಏರ್​ ಫೋರ್ಸ್​​ ನ ಭಾಗವಾಗಿವೆ. ಮೋದಿ ವಿಮಾನವನ್ನು ಈ ಫೈಟರ್ ಜೆಟ್​​ ಗಳು ಎಸ್ಕಾರ್ಟ್ ಮಾಡಿರುವುದು ಅತಿಥಿ ಸತ್ಕಾರದ ಒಂದು ಭಾಗವಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಕೆಲ ಪ್ರಮುಖ ವಿಶ್ವ ಮುಖಂಡರು ಸೌದಿಗೆ ಭೇಟಿ ನೀಡಿದಾಗ ಅವರ ವಿಮಾನಗಳನ್ನು ಸೌದಿ ಫೈಟರ್ ಜೆಟ್ ​​ಗಳು ಎಸ್ಕಾರ್ಟ್ ಮಾಡಿದ ಉದಾಹರಣೆಗಳಿವೆ. 2022ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಅವರು ಸೌದಿಗೆ ತೆರಳಿದಾಗ ಅವರ ನಾಲ್ಕು ಸೌದಿ ಫೈಟರ್ ಜೆಟ್​​ಗಳು ಜೊತೆಗೆ ಹೋಗಿದ್ದವು. 2024ರಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಅವರಿಗೂ ಇಂಥದ್ದೊಂದು ಸ್ವಾಗತ ನೀಡಲಾಗಿತ್ತು.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರು, ‘ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಕ್ಕೆ ಎರಡು ದಿನಗಳ ರಾಜ್ಯ ಭೇಟಿಗೆ ತೆರಳಿದ್ದಾರೆ. ಇದು ಪ್ರಧಾನಿಯವರ ಸೌದಿ ಅರೇಬಿಯಾಕ್ಕೆ ಮೂರನೇ ಭೇಟಿ. ಪ್ರಧಾನಿಯವರ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಗೌರವಾನ್ವಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ 2 ನೇ ನಾಯಕರ ಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಹೇಳಿದ್ದಾರೆ.

Exit mobile version